ಮೊಳಕಾಲ್ಮುರು:-ಸ್ಥಳೀಯ ಬ್ಯಾಂಕ್ಗಳಿಂದ ಹಣ ಬಿಡಿಸಿಕೊಂಡು ತೆರಳುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಇವರ ಗಮನವನ್ನು ಬೇರೆಡೆ ಸೆಳೆದು ಹಣ ಲಪಟಾಯಿಸಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳನನ್ನು ಶನಿವಾರದಂದು ಮೊಳಕಾಲ್ಮುರು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಭದ್ರಾವತಿ ಟೌನ್ ಎನ್.ಸೂರ್ಯ(19) ಎಂದು ಗುರುತಿಸಲಾಗಿದೆ. ಈತನಿಂದr ಪೊಲೀಸರು ನಾಲ್ಕು ಲಕ್ಷ ರೂ ಹಣ ವಶಪಡಿಸಿಕೊಂಡು ಈತನ ತಂಡದ ಸದಸ್ಯರ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.