ಕಳೆದ ಸೆಪ್ಟೆಂಬರ್ ತಿಂಗಳ 19ರಂದು ತೆಪ್ಪದಲ್ಲಿ ಚಕ್ರಾ ಹಿನ್ನೀರು ದಾಟುತ್ತಿರುವಾಗ ಸಂಭವಿಸಿದ ಅವಘಡದಲ್ಲಿ ಸಾವಿಗೀಡಾಗ ತಾಲೂಕಿನ ಹೊಸನಗರ ಹೊಸೂರು-ಸಂಪೆಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಟ್ವಾಡಿ ಮಜಿರೆ ವಾಸಿ ಮೃತ ಯುವಕ ಪೂರ್ಣೇಶ್ ಕುಟುಂಬಕ್ಕೆ ಶಾಸಕ ಆರಗ ಜ್ಞಾನೇಂದ್ರ ಸರ್ಕಾರದ 5 ಲಕ್ಷ ರೂ. ಮೌಲ್ಯದ ಪರಿಹಾರದ ಚೆಕ್ ಅನ್ನು ಮೃತನ ಕುಟುಂಬಕ್ಕೆ ಗುರುವಾರ ಸಂಜೆ 5 ಗಂಟೆಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಈ ಭಾಗದ ಪರಿಶಿಷ್ಟ ಕುಟುಂಬಗಳಿಗೆ ಸಂಚಾರ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಪೂರ್ಣೇಶ್ ಮೃತಪಟ್ಟ ಸಮೀಪದಲ್ಲಿ 25 ಲಕ್ಷ ರೂ. ಅನುದಾನದಲ್ಲಿ ಕಾಲುಸೇತುವೆ ನಿರ್ಮಾಣಕ್ಕೆ ಈಗಾಗಲೇ ತಯಾರಿ ನಡೆದು ಹಣ ಬಿಡುಗಡೆಯಾಗಿದೆ.