ಕಲಬುರಗಿ : ಕಲಬುರಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಂದ ಇಬ್ಬರು ಕುಖ್ಯಾತ ಸುಲಿಗೆಕೋರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಲಿ ಮಹಿಳೆಯನ್ನ ಸುಲಿಗೆಕೋರರು ಕರೆದುಕೊಂಡು ಹೋಗ್ತಿರೋ ಸಿಸಿ ಟಿವಿ ವಿಡಿಯೋ ಡಿ4 ರಂದು ಬೆಳಗ್ಗೆ 8 ಗಂಟೆಗೆ ಪಬ್ಲಿಕ್ ಆ್ಯಪ್‌ಗೆ ಲಭ್ಯವಾಗಿದೆ.. ಕಲ್ಲಪ್ಪ ಪೂಜಾರಿ ಮತ್ತು ಸಂತೋಷ್ ಇಬ್ಬರು ಸುಲಿಗೆಕೋರರು, ಕೂಲಿ ಕೆಲಸಕ್ಕೆಂದು ಸುನೀತಾ ರಾಠೋಡ್‌ರನ್ನ ಕರೆದುಕೊಂಡು ಹೋಗಿ ಚಿನ್ನಾಭರಣಗಳನ್ನ ದೋಚಿಕೊಂಡು ಹೋಗಿದ್ದರು. ಸಧ್ಯ ಇಬ್ಬರು ಸುಲಿಗೆಕೋರರನ್ನ ಬಂಧಿಸಿರೋ ಪೊಲೀಸರು, ಬರೊಬ್ಬರಿ ₹7.62 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.