ರಾಯಚೂರು ತಾಲ್ಲೂಕಿನ ಯರಮರಸ್ ಬಳಿ ಇರುವ ಯರಮರಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಎರಡೂ ಘಟಕಗಳ ಸ್ಥಗಿತವಾಗಿದ್ದು, ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಶನಿವಾರ 8 ಗಂಟೆ ಮಾಹಿತಿ ಪ್ರಕಾರ 2 ಘಟಕಗಳು ಪ್ರಸ್ತುತ ಉತ್ಪಾದನೆ ನಿಲ್ಲಿಸಲಾಗಿದೆ. ಒಂದು ಘಟಕದಿಂದ 800 ಮಗಾವ್ಯಾಟ್ ಉತ್ಪಾದಿಸಲಾಗುತ್ತಿತ್ತು, ಆದರೇ ಇದೀಗ ಎರಡೂ ಸ್ಥಗಿತವಾದ ಕಾರಣ 1600 ಮೆಘಾವ್ಯಾಟ್ ವಿದ್ಯುತ್ ಖೋತಾ ಆದಂತಾಗಿದೆ. ಅಧಿಕಾರಿಗಳು ಆದಷ್ಟು ತ್ವರಿತ ಗತಿಯಲ್ಲಿ ಸ್ಥಗಿತವಾದ ಘಟಕ ಆರಂಬಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.