ಕೊಪ್ಪಳ: ಒಣಕೆ ಏಟಿಗೆ ಪ್ರಾಣ ಬಿಟ್ಟ ಪತಿರಾಯ, ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ....!
Koppal, Koppal | Sep 27, 2025 ಮನೆಯಲ್ಲಿ ಶುರುವಾದ ಸಣ್ಣ ಗಂಡ ಹೆಂಡತಿಯ ಜಗಳದಲ್ಲಿ ಹೆಂಡತಿ ಒಣಕೆಯಿಂದ ಹೊಡೆದ ಪೆಟ್ಟಿಗೆ ಗಂಡ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ನಡೆದಿದೆ. ಕೆಪಿಸಿಎಲ್ ಉದ್ಯೋಗಿ ರಮೇಶ 51 ಸಾವನ್ನಪ್ಪಿದ ದುರ್ದೈವಿ, ಪತ್ನಿ ಮಹಾದೇವಿ ಒಣಕೆಯಿಂದ ಹೊಡೆದ ವೇಳೆ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಬೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ..