ಹಿರಿಯೂರು: ಆಲೂರು ಕ್ರಾಸ್ ಬಳಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಗಂಬೀರ
ಆಲೂರು ಕ್ರಾಸ್ ಬಳಿ ಲಾರಿ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಗಂಬೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಿರಿಯೂರು ಹೊರ ವಲಯದ ಆಲೂರು ಕ್ರಾಸ್ ಬಳಿ ಬುದವಾರ ಸಂಜೆ 6 ಗಂಟೆಗೆ ಘಟನೆ ನಡೆದಿದ್ದು ಮೃತನ ಗುರುತು ಇನ್ನೂ ಪತ್ತಾಯಾಗಬೇಕಿದೆ. ಇನ್ನೂ ಈ ವ್ಯಕ್ತಿ ರಸ್ತೆ ದಾಟುತ್ತಿದ್ದು ಈ ವೇಳೆ ತಮಿಳುನಾಡು ಮೂಲದ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು ಈ ವೇಳೆ ಗಂಬೀರವಾಗಿ ಗಾಯಗೊಂಡ ವ್ಯಕ್ತಿಯನ್ನ ಸ್ಥಳೀಯರ ಸಹಾಯದಿಂದ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಧಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ