ಶಿವಮೊಗ್ಗ ತಾಲೂಕಿನ ಆನವೇರಿಯಲ್ಲಿ ಅಕ್ರಮ ಮರಳು ಸಂಗ್ರಹದ ಅಡ್ಡದ ಮೇಲೆ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ದಾಳಿ ನಡೆದಿದೆ. ಆನವೇರಿ ಗ್ರಾಮದಲ್ಲಿ ತಹಶೀಲ್ದಾರ್, ನಾಡ ಕಚೇರಿ ಉಪ ತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಆನವೇರಿಯ ತುಂಗಭದ್ರಾ ನದಿ ತೀರದಲ್ಲಿ ಅಂದಾಜು 10 ರಿಂದ 12 ಲಾರಿ ಲೋಡ್ ಅಕ್ರಮ ಮರಳನ್ನ ಸಂಗ್ರಹಿಸಲಾಗಿತ್ತು. ಮರಳನ್ನ ವಶಕ್ಕೆ ಪಡೆದುಕೊಂಡು ಸುಮಾರು ನಾಲ್ಕು ಜನರನ್ನ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಆರೋಪಿಗಳನ್ನ ಹೊಳೆಹೊನ್ನೂರು ಠಾಣೆಗೆ ಹಸ್ತಾಂತರ ಮಾಡಲಾಗಿದೆ.