ಮೊಳಕಾಲ್ಮುರು: ರಾಯಾಪುರದಲ್ಲಿ ನಡೆದ ವಾಲ್ಮೀಕಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ವಾಲ್ಮೀಕಿಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ
ಮೊಳಕಾಲ್ಮುರು:-ಅಧಿಕಾರಕ್ಕೆ ಏರಲು ನಮ್ಮ ಹಿಂದುಳಿದ ಸಮುದಾಯಗಳ ಮತಗಳನ್ನು ಪಡೆದ ಸರಕಾರಗಳು ಅಧಿಕಾರಕ್ಕೆ ಬಂದ ನಂತರ ನಮ್ಮನ್ನ ತಾತ್ಸಾರ ಮಾಡುತ್ತವೆ ಅಂತಾ ಸರಕಾರಗಳ ವಿರುದ್ಧ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಗುಡುಗಿದ್ದಾರೆ. ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ರಾಯಾಪುರದಲ್ಲಿ ವಾಲ್ಮೀಕಿ ಪುತ್ಥಳಿ ಅಬಾವರಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಮ್ಮಂಥ ಹಿಂದುಳಿದ ಸಮುದಾಯಗಳಲ್ಲಿ ಒಗ್ಗಟ್ಟು ಇಲ್ಲ. ಹಾಗಾಗಿ ನಮ್ಮ ಸಮುದಾಯಗಳ ಓಟನ್ನು ಪಡೆದು ಅಧಿಕಾರಕ್ಕೆ ಬಂದ ಸರಕಾರಗಳು ನಮ್ಮನ್ನು ತಾತ್ಸಾರ ಮಾಡುತ್ತವೆ. ಸಂವಿಧಾನ ಬದ್ಧವಾಗಿ ನಮಗೂ ಸಾಮಾಜಿಕ, ಶೈಕ್ಷಣಿಕ ಔದ್ಯೋಗಿಕ ಹಾಗೂ ರಾಜಕೀಯ ಹಕ್ಕಿದೆ ಎಂದರು.