ಕಲಬುರಗಿ : ಮಕರ ಸಂಕ್ರಾಂತಿ ಹಬ್ಬದ ನಿಮ್ಮಿತ್ತ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕುಂದನೂರು ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಸಂಗಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ಬರ್ತಿದ್ದು, ಬಂದತಹ ಭಕ್ತರಿಗಾಗಿ ಪುಣ್ಯಸ್ನಾನ ಮಾಡಲು ಉಚಿತವಾಗಿ ಕಡಲೆ ಹಿಟ್ಟು ವಿತರಣೆ ಮಾಡಿರೋ ಅಪರೂಪದ ಪ್ರಸಂಗ ಜರುಗಿದೆ.. ಜ15 ರಂದು ಮಧ್ಯಾನ 12 ಗಂಟೆಯಿಂದಲೇ ಭಕ್ತರು ಆಗಮಿಸಿದ್ದು, ಈ ವೇಳೆ ಭಕ್ತರು ಶಾಂಪು, ಸಾಬೂನು ಬಳಸುವುದರಿಂದ ನೀರು ಕಲುಷಿತಗೊಳ್ಳೊ, ಹಿನ್ನಲೆಯಲ್ಲಿ ವರದಶ್ರೀ ಫೌಂಡೇಶನ್ ವತಿಯಿಂದ ಪುಣ್ಯಸ್ನಾನ ಮಾಡೋ ಸ್ಥಳದಲ್ಲಿ ಬಂದಂತಹ ಭಕ್ತರಿಗೆ ಉಚಿತ ಕಡಲೆ ಹಿಟ್ಟು ನೀಡಿದ್ದು, ಕಡಲೆ ಹಿಟ್ಟಿನಿಂದಲೇ ಸ್ನಾನ ಮಾಡುವುದರ ಮೂಲಕ ನೀರು ಕಲುಷಿತಗೊಳ್ಳೊದನ್ನ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.