ಕಾಳಗಿ: ಸೆಲ್ಪಿ ತೆಗೆದುಕೊಳ್ಳಲು ಹೋಗಿ ನೀರಿಗೆ ಬಿದ್ದು ನಾಪತ್ತೆಯಾದ ಯುವಕ, ಹೇರೂರ ಕೆ ಜಲಾಶಯದಲ್ಲಿ ಘಟನೆ
ಕಾಳಗಿ ತಾಲ್ಲೂಕಿನ ಹೇರೂರ ಕೆ. ಗ್ರಾಮದ ಬಳಿಯ ಬೆಣ್ಣೆತೊರಾ ಜಲಾಶಯದ ಕೆಳಭಾಗದಲ್ಲಿ ಸೆಲ್ಪಿ ತೆಗೆದುಕೊಳ್ಳುವ ವೇಳೆ ದುರಂತವೊಂದು ಸಂಭವಿಸಿದೆ. ಕಲಬುರಗಿಯ ಆಜಾದಪುರ ನಿವಾಸಿ ಹಸನ್ ಅಬ್ದುಲ್ ಗಫರ್ (17) ಎಂಬ ಯುವಕ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಮಾಹಿತಿಯ ಪ್ರಕಾರ, ಹಸನ್ ಸೇರಿದಂತೆ 10 ಜನ ಸ್ನೇಹಿತರು ಜಲಾಶಯಕ್ಕೆ ಭೇಟಿ ನೀಡಿದ್ದರು. ನೀರಿನ ಕೆಳಭಾಗದಲ್ಲಿ ಸೆಲ್ಪಿ ತೆಗೆದುಕೊಳ್ಳುವಾಗ ಕಾಲುಜಾರಿ ಹಸನ್ ಮತ್ತು ಸರ್ಫರಾಜ್ ಮನ್ನೂರ (19) ನೀರಿನಲ್ಲಿ ಬಿದ್ದಿದ್ದಾರೆ. ಸರ್ಫರಾಜ್ ಗಿಡವೊಂದರ ಸಹಾಯದಿಂದ ಹೊರಬಂದರೆ, ಹಸನ್ ಕಾಣೆಯಾಗಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಪೊಲೀಸರು ಭೇಟಿ ನೀಡಿ ಶೋಧಕಾರ್ಯ ನಡೆಸಿದ್ದಾರೆಂದು ಭಾನುವಾರ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ