ಸಿರವಾರ: ಕವಿತಾಳದಲ್ಲಿ ಚಾಲಕನನ್ನೆ ಕೆಳಗಿಳಿಸಿ ಬಸ್ ಹತ್ತಿದ ಪ್ರಯಾಣಿಕರು
Sirwar, Raichur | Oct 31, 2025 ರಾಯಚೂರು - ಲಿಂಗಸಗೂರು ರಸ್ತೆಯಲ್ಲಿ ಸಾರಿಗೆ ಬಸ್ಸುಗಳ ಓಡಾಟದ ಸಮಸ್ಯೆ ಇದ್ದಂತೆ ಕಾಣುತ್ತದೆ, ಗಂಟೆಗಳಿಂದ ಬಸ್ಸಿಗಾಗಿ ಕಾದ ಪ್ರಯಾಣಿಕರು ಬಂದ ಬಸ್ಸಿನ ಚಾಲಕನನ್ನೇ ಇಳಿಸಿ ಬಸ್ ಹತ್ತಿದ ಘಟನೆ ಕವಿತಾಳ ಗ್ರಾಮದ ಬಸ್ ನಿಲ್ದಾಣದಲ್ಲಿ ಜರುಗಿದೆ. ಈ ಒಂದು ಮಾರ್ಗದಲ್ಲಿ ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಸಾರಿಗೆ ಬಸ್ಸುಗಳ ಓಡಾಟ ಕಡಿಮೆ ಇರುವ ಕಾರಣ, ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನಲೆ ತಡವಾಗಿ ಬಂದ ಬಸ್ಸಿನ ಚಾಲಕ ಇಳಿಯುತ್ತಿದ್ದಂತೆ ಪ್ರಯಾಣಿಕರು ಅದೇ ಬಾಗಿಲಿನಿಂದ ಹತ್ತಿದ್ದಾರೆ.