ಸಿರವಾರ: ಜಿಲ್ಲೆಯಲ್ಲಿ ನಿಲ್ಲದ ಬಾಲಕಾರ್ಮಿಕ ಪದ್ಧತಿ, ಗೂಡ್ಸ್ ವಾಹನ ಸವಾರಿ
Sirwar, Raichur | Oct 31, 2025 ರಾಯಚೂರು ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಮತ್ತು ಗೂಡ್ಸ್ ವಾಹನಗಳಲ್ಲಿ ಕುರಿಗಳಂತೆ ಜನರನ್ನ ತುಂಬಿಕೊಂಡು ಹೋಗುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಹತೋಟಿಯಲ್ಲಿದೆ ಎಂಬ ಮಾತು ಕೇವಲ ಕಡತಗಳಲ್ಲಿ ಮಾತ್ರ ಆದರೆ ವಾಸ್ತವವಾಗಿ ಎಲ್ಲವೂ ಸರ್ವೇಸಾಮಾನ್ಯವಾಗಿ ನಡೆದಿದೆ. ಪೊಲೀಸ್ ಠಾಣೆ ಮತ್ತು ಕಾರ್ಮಿಕ ಇಲಾಖೆಗಳ ಮುಂದೆಯೇ ಗೂಡ್ಸ್ ವಾಹನಗಳು ಮಕ್ಕಳನ್ನು, ಕೂಲಿ ಕಾರ್ಮಿಕರನ್ನು ಕೂರಿಸಿಕೊಂಡು ವಾಹನಗಳು ಹೋಗುತ್ತಿದ್ದರು ಯಾವುದೇ ಕ್ರಮ ಆಗುತ್ತಿಲ್ಲ.