ಕಂಪ್ಲಿ ತಾಲೂಕಿನ ಮೆಟ್ರಿ ಹಾಗೂ ದೇವಲಾಪುರ ಗ್ರಾಮದ ಮಧ್ಯೆ ಭತ್ತದ ಮೂಟೆಗಳನ್ನು ರೈಸ್ ಮಿಲ್ ಗೆ ಸಾಗಿಸುತ್ತಿದ್ದ ಎತ್ತಿನ ಗಾಡಿಗೆ ಸರ್ಕಾರಿ ಬಸ್ ಢಿಕ್ಕಿ ಹೊಡೆದಿರುವ ಘಟನೆ ಡಿ.16,ಮಂಗಳವಾರ ಬೆಳಿಗ್ಗೆ 9:30ಕ್ಕೆ ನಡೆದಿದೆ. ರೈತರು ಭತ್ತದ ಮೂಟೆಗಳನ್ನು ಎತ್ತಿನ ಗಾಡಿ ಮೂಲಕ ದರೋಜಿ ರೈಸ್ ಮಿಲ್ ಗೆ ಕೊಂಡೊಯ್ಯುವಾಗ ಬಸ್ ಢಿಕ್ಕಿ ಹೊಡೆದಿದೆ, ಢಿಕ್ಕಿ ಹೊಡೆದ ಪರಿಣಾಮ ಎತ್ತಿನ ಬಂಡಿ ರಸ್ತೆಯಿಂದ ಪಕ್ಕದ ಗದ್ದೆಗೆ ಬಿದ್ದಿದೆ, ಎತ್ತುಗಳಿಗೆ ಗಾಯಗಳಾಗಿದ್ದು, ಭತ್ತದ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.