ನಗರದ ಹಳೆ ಆರ್‌ಟಿಒ ಕಚೇರಿ ಮುಂಭಾಗದ ರಸ್ತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿಡಬೇಕೆಂದು ಅಂಬಿಗರ ಚೌಡಯ್ಯ ಯುವ ಸೇನೆ ಆಗ್ರಹಿಸಿದೆ. ಈ ಸಂಬಂಧ ಸೇನೆಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು...ನಗರದ ತಾಯಿ ಮಗುವಿನ ವೃತ್ತದಿಂದ ಶಿವನಗರಕ್ಕೆ ಹೋಗುವ ರಸ್ತೆಗೆ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿಡಬೇಕು. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ಅಂಬಿಗರ ಚೌಡಯ್ಯನವರು ಕೊಡುಗೆ ಕೊಟ್ಟಿದ್ದಾರೆ. ಅಂತಹ ಮಹಾನುಭವ ಹೆಸರಿಡುವುದು ಸೂಕ್ತ ಎಂದು ತಿಳಿಸಿದ್ದಾರೆ. ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಟೋಕರೆ ಕೋಳಿ ಸಮಾಜ ಸಂಘದ ಬೀದರ್ ದಕ್ಷಿಣ ಅಧ್ಯಕ್ಷ ಷಣ್ಮುಖಪ್ಪ ಶ