ಮಳವಳ್ಳಿ: ತಾಲೂಕಿನ ಶಿವನಸಮುದ್ರ ಬಳಿ ನಾಲಿಗೆ ಬಿದ್ದಿದ್ದ ಆನೆಯ ಮೇಲೆತ್ತುವ ಕಾರ್ಯಾಚರಣೆ ಯಶಸ್ವಿ ಆನೆ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಮಳವಳ್ಳಿ : ತಾಲ್ಲೂಕಿನ ಶಿವನಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್ ಗೆ ಶನಿವಾರ ರಾತ್ರಿ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯಾಧಿ ಕಾರಿ ಹಾಗೂ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಅರವಳಿಕೆ ಮದ್ದು ನೀಡಿ, ಪ್ರಜೆ ತಪ್ಪಿಸಿ ನಂತರ ಕಾಡಾನೆಯನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಶನಿವಾರ ರಾತ್ರಿ ನೀರು ಕುಡಿಯಲು ಬಂದು ಆಕಸ್ಮಿಕವಾಗಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಕೆ ಮಾಡುವ ಸುಮಾರು 40ರಿಂದ 50 ಅಡಿ ಅಳದ ಕೆನಾಲ್(ಕಾಲುವೆ)ನ ಗೇಟ್ ಮೂಲಕ ಗಂಡು ಕಾಡಾನೆಯೊಂದು ಇಳಿದಿತ್ತು, ಆದರೆ ನೀರಿನ ಹರಿವಿನ ರಭಸಕ್ಕೆ ವಾಪಾಸ್ ಮೇಲೆ ಬಾರದೆ ಆನೆಯು ಕೆನಾಲ್ ನಲ್ಲಿಯೇ ಓಡಾಟ ನಡೆಸುತ್ತಿತ್ತು.