ಶಿವಮೊಗ್ಗ: ತುಂಗಾ ನದಿ ದಡದಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ:ಶಿವಮೊಗ್ಗದ ಇಬ್ಬರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಐಸಿಸ್ ಉಗ್ರ ಸಂಘಟನೆಯ ಶಿವಮೊಗ್ಗ ಜಾಲ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಾಗಾಗಿ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾ.ಕೆಂಪರಾಜು ಅವರು ಇಬ್ಬರು ಅಪರಾಧಿಗಳಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಆರೋಪಿ 8 ಜಬೀವುಲ್ಲಾ ಮತ್ತು ಆರೋಪಿ 9 ನದೀಮ್ ಫೈಸಲ್‌ಗೆ ಶಿಕ್ಷೆಯಾಗಿದೆ. 2022ರ ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬುವವರಿಗೆ ಮಾರಕಾಸ್ತ್ರದಿಂದ ಇರಿಯಲಾಗಿತ್ತು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್, ಆತನ ಸಹಚರರಾದ ಮಾಜ್ ಮುನೀರ್ ಅಹಮದ್, ಸಯ್ಯದ್ ಯಾಸೀನ್ ವಿಧ್ವಂಸಕ ಕೃತ್ಯಕ್ಕೆ ಸಂಚುರೂಪಿಸಿರುವುದು ತಿಳಿದುಬಂದಿತ್ತು. ಈ ಕುರಿತಾದ ಮಾಹಿತಿಯು ಶನಿವಾರ ಲಭ್ಯವಾಗಿದೆ.