ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸರ್ವಜ್ಞನಗರ ವಿಭಾಗದ ವಾರ್ಡ್ 29 ರ ಕಲ್ಯಾಣ ನಗರದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಸ್ತೆ ಬದಿ ನಾಗರಿಕರೊಬ್ಬರು ವಾಹನದಲ್ಲಿ ಬಂದು ಕಸ ಸುರಿಯುತ್ತಿರುವ ದೃಶ್ಯವನ್ನು ನೆರೆಹೊರೆಯ ನಾಗರಿಕರೊಬ್ಬರು ವಿಡಿಯೋ ಚಿತ್ರೀಕರಿಸಿ ನಗರ ಪಾಲಿಕೆಗೆ ಕಳುಹಿಸಿರುವುದನ್ನು ಗಮನಿಸಿದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ವಾಹನದ ಮಾಹಿತಿಯನ್ನು ತಕ್ಷಣ ಪತ್ತೆ ಹಚ್ಚಿ ಸದರಿ ವಾಹನದ ಮಾಲೀಕರಿಗೆ 5 ಸಾವಿರ ದಂಡ ವಿಧಿಸಿ, ಮತ್ತೊಮ್ಮೆ ಈ ಕಾರ್ಯ ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.