ರಾಯಚೂರು ಜಿಲ್ಲೆಯಲ್ಲು ಶನಿವಾರ 7 ಗಂಟೆಗೆ ಕನಿಷ್ಟ ತಾಪಮಾನ ದಾಖಲಾಗಿದ್ದು ತೀವ್ರ ಚಳಿಯಿಂದಾಗಿ ರೈತರ ಕೃಷಿ ಚಟುವಟಿಕೆಗಳ ಮೇಲೂ ನೇರ ಪರಿಣಾಮ ಬೀರುತ್ತಿದೆ. ತಾಪಮಾನ ಇಳಿಕೆಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಕೃಷಿ ವಿವಿ ಅಧಿಕಾರಿಗಳು ರೈತರಿಗೆ ತಕ್ಷಣವೇ ಬೆಳೆಗಳಿಗೆ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ಸಲಹೆ ನೀಡಿದ್ದಾರೆ.