ಮೊಳಕಾಲ್ಮುರು: ಕರ್ಕಶ ಶಬ್ದ ಮಾಡಿಕೊಂಡು ಟ್ರ್ಯಾಕ್ಟರ್ ಓಡಿಸಿದ್ರೆ ಚಾಲಕರಿಗೆ ಬೀಳುತ್ತೆ ದಂಡ:-ಪಟ್ಟಣದಲ್ಲಿ ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಎಚ್ಚರಿಕೆ
ಮೊಳಕಾಲ್ಮುರು:-ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಹಾಗಾಗಿ ಟ್ರ್ಯಾಕ್ಟರ್ ಚಾಲಕರು ವಾಹನಗಳನ್ನು ಚಲಾಯಿಸುವಾಗ ವೇಗದ ಮಿತಿ ಇರಲಿ ಎಂದು ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಹೇಳಿದರು. ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ಟ್ರ್ಯಾಕ್ಟರ್ ಚಾಲಕರಿಗೆ ಸಂಚಾರ ನಿಯಮಗಳ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಚಾಲಕರು ವೇಗವಾಗಿ ವಾಹನ ಚಲಾಯಿಸಬಾರದು. ರಸ್ತೆಗಳ ತಿರುವುಗಳಲ್ಲಿ ಸುರಕ್ಷತೆಯಿಂದ ವಾಹನ ಓಡಿಸಿ,ಜನ ಸಂಚಾರ ಇರುವ ರಸ್ತೆಗಳಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ,ಟ್ರ್ಯಾಕ್ಟರ್ ಮುಂಭಾಗದಲ್ಲಿ ಜನರನ್ನು ಕರೆದುೊಯ್ಯುವಂತಿಲ್ಲ,ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು ಕಾನೂನು ಬಾಹಿರ ಎಂದರು.