ಶ್ರೀರಂಗಪಟ್ಟಣದಲ್ಲಿ ಖಾಕಿ ಹೈ ಅಲರ್ಟ್ ಸ್ಥಳದಲ್ಲಿ SP ಮೊಕ್ಕಾಂ ಶ್ರೀರಂಗಪಟ್ಟಣದಲ್ಲಿ ಬುಧವಾರ ಹನುಮಮಾಲಾಧಾರಿಗಳ ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಪೊಲೀಸ್ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆಯ ಉದ್ದಕ್ಕೂ ಪೊಲೀಸರು ಸರ್ಪಗಾವಲು ಹಾಕಲಿದ್ದಾರೆ. ಇದಕ್ಕಾಗಿ ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ವತಃ ಎಸ್ಪಿ ಸ್ಥಳದಲ್ಲಿ ಹಾಜರಿದ್ದು, ಭದ್ರತೆಗೆ ನಿಯೋಜಿತ ಪೊಲೀಸರಿಂದ ವರದಿ ಕೇಳುತ್ತಾ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲು ಎಸ್ಪಿ ಮುಂದಾಗಿದ್ದಾರೆ .