ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕನ್ನಡ ಗೀತೆ ಹಾಡಿ ಅಭಿಮಾನ ಮೆರೆದ ಎಂಎಲ್ಸಿ ಕೆ.ಎಸ್. ನವೀನ್
ಕೋಟೆನಾಡು ಚಿತ್ರದುರ್ಗ MLC ಕೆಎಸ್ ನವೀನ್ ಕನ್ನಡ ರಾಜ್ಯೋತ್ಸವದ ಹಿನ್ನಲೆ ಕರ್ನಾಟಕದ ಇತಿಹಾಸದಲಿ ಎಂಬ ಹಾಡು ಹಾಡಿ ಕನ್ನಡ ಅಭಿಮಾನವನ್ನ ತೋರಿದ್ದಾರೆ. ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವದೇಶಿ ಮೇಳ ಸಮಾರೋಪ ಗೊಂಡಿದೆ. ಇದೇ ವೇದಿಕೆಯಲ್ಲಿ ಕನ್ನಡ ರಾಜ್ಯೂತ್ಸವದ ಹಿನ್ನಲೆ ಕರ್ನಾಟಕದ ಇತಿಹಾಸದಲಿ ಹಾಡನ್ನ ಹಾಡಿದ MLC ಕೆಎಸ್ ನವೀನ್ ಎಲ್ಲರನ್ನ ರಂಜಿಸಿದ್ರು. ಎಂದೂ ವೇದಿಕೆ ಮೇಲೆ ಹಾಡು ಹೇಳದ ಕೆಎಸ್ ನವೀನ್ ಕನ್ನಡ ತನವನ್ನ, ಕರ್ನಾಟಕದ ಇತಿಹಾಸ ಸಾರುವ ಹಾಡು ಹಾಡಿ ಕನ್ನಡಾಭಿಮಾನ ತೋರಿದ್ದಾರೆ. ಇದರಿಂದ ನೋಡುಗರು ಫುಲ್ ಖುಷ್ ಆದ್ರು.