ಕುಮಟಾ : ಹೊಸ ವರ್ಷದ ನಿಮಿತ್ತವಾಗಿ ತಾಲೂಕಿನ ಗೋಕರ್ಣಕ್ಕೆ ಮತ್ತು ಹತ್ತಿರದ ಬೀಚ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಾಹನಗಳ ಸಂದಣಿ ಗುರುವಾರ ಕಂಡು ಬಂದಿದೆ. ಗುರುವಾರ ಸಂಜೆ 4:00 ಗಂಟೆ ಸುಮಾರಿಗೆ ತಾಲೂಕಿನ ಗೋಕರ್ಣ, ಮಾದನಗೇರಿ ಮೊದಲಾದ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಸಮಸ್ಯೆ ಎದುರಾಗಿತ್ತು. ಸ್ಥಳೀಯ ಪೊಲೀಸರು ಸುಗಮ ಸಂಚಾರಕ್ಕೆ ಅಗತ್ಯ ಕ್ರಮವನ್ನು ಕೈಗೊಂಡು ಪ್ರವಾಸಿಗರ ಮತ್ತು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾದರು.