ಹೊಸನಗರ: ಹೊಟ್ಟೆನೋವಿನಿಂದ ಬೇಸತ್ತು ಯುವಕ ಆತ್ಮಹತ್ಯೆ, ಕೆಂಚನಾಲ ಗ್ರಾಮದಲ್ಲಿ ಘಟನೆ
ಹಲವಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು ಶನಿವಾರ ಬೆಳಿಗ್ಗೆ 7 ಮಾಹಿತಿ ಲಭ್ಯವಾಗಿದೆ. ಕೆಂಚನಾಲ ಗ್ರಾಮದ ಕಿರಣ (26) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಕಿರಣ್ ಮಧ್ಯಪಾನದ ಚಟ ಹೊಂದಿದ್ದು, ಹಲವಾರು ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಕುಟುಂಬದವರು ಹಲವು ಬಾರಿ ಚಿಕಿತ್ಸೆ ಮಾಡಿಸಿದರೂ ನೋವು ಕಡಿಮೆಯಾಗಿರಲಿಲ್ಲ. l