ಚಳ್ಳಕೆರೆ :ರಂಗೋಲಿ ಚಿತ್ತಾರವು ಭಾರತೀಯ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ. ಇಂತಹ ಕಲೆ ಉಳಿವಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿವೆ ಎಂದು ಶಿಮುಲ್ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕರು ಹಾಗೂ ರಂಗೋಲಿ ಸ್ಪರ್ಧೆಯ ಆಯೋಜಕರಾದ ಬಿಸಿ. ಸಂಜೀವಮೂರ್ತಿ ಹೇಳಿದರು. ತಾಲೂಕಿನ ನಗರಗೆರೆ ಗ್ರಾಮದ ಕಲಾಮಂದಿರದ ಮುಂಭಾಗದಲ್ಲಿ ಮಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಪ್ರಯುಕ್ತ ಕನ್ನಡ ಹಿತರಕ್ಷಣ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.