ಯಾದಗಿರಿ ಜಿಲ್ಲೆಯ ಸುರಪುರ ನಗರದ ಐತಿಹಾಸಿಕ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಶನಿವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುರಪುರ ಅರಸು ಮನೆತನದ ರಾಜಾ ಲಕ್ಷ್ಮಿನಾರಾಯಣ ನಾಯಕ ಭಾಗವಹಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಜನೆ ಹಾಗೂ ರುಕ್ಮಿಣಿ ಪಾಂಡುರಂಗ ದೇವರ ಪೂಜಾ ಕೈಂಕರ್ಯ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಉದ್ಯಮಿ ಆನಂದ ವರ್ಮಾ, ಪಾರಪ್ಪ ಗುತ್ತೇದಾರ, ಗಣೇಶ ಜಾಗೀರದಾರ್ ಸೇರಿದಂತೆ ಹರೇ ವಿಠ್ಠಲ ಸೇವಾ ಸಮಿತಿಯ ಸದಸ್ಯರು ಸೇರಿ ನೂರಾರು ಜನ ಭಾಗವಹಿಸಿದ್ದರು.