ಚಿತ್ರದುರ್ಗ: ನಗರದ ಜೆಸಿಆರ್ ಬಡಾವಣೆಯ ಕಟ್ಟಡದಲ್ಲಿ ವಿಧ್ಯುತ್ ಶಾರ್ಟ್ ಸರ್ಕ್ಯೂಟ್
ವಿಧ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟ್ಟಡದ ವಿಧ್ಯುತ್ ಉಪಕರಣಗಳು ಸುಟ್ಟು ಕರಕಲಾದ ಘಟನೆ ಚಿತ್ರದುರ್ಗದ ಜೆ ಸಿ ಆರ್ ಬಡಾವಣೆಯಲ್ಲಿ ನಡೆದಿದೆ. ಪ್ರಗತಿ ಆಸ್ಪತ್ರೆ ಮುಂಬಾಗದ ಕಟ್ಟಡದಲ್ಲಿ ಘಟನೆ ನಡೆದಿದ್ದು ವಿಧ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೋಟಾರ್ ಬೋರ್ಡ್ ಗೆ ವಿಧ್ಯುತ್ ತಗುಲಿದ್ದು ಕ್ಷಣಾರ್ಧದಲ್ಲಿ ಮೋಟಾರ್ ಬೋರ್ಡ್ ಹೊತ್ತಿ ಉರಿದಿದ್ದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ಕ್ಷಣಾರ್ಧದಲ್ಲಿ ಆವರಿಸಿದ ಬೆಂಕಿಯನ್ನ ಅಗ್ನಿಶಾಮಕ ಸಿಬ್ಬಂದಿಗಳು ನಂದಿಸಿದ್ದಾರೆ.