ಕಲಬುರಗಿ: ನಗರದಲ್ಲಿ ಸುಪಾರಿ ಕೊಲೆ ಪ್ರಕರಣ: ಮಹಿಳೆ ಸೇರಿ 6 ಜನರಿಗೆ ಜೀವಾವಧಿ ಶಿಕ್ಷೆ
ಸುಪಾರಿ ಪಡೆದು ವ್ಯಕಿಯೊಬ್ಬನ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ 6 ಜನರಿಗೆ ಇಲ್ಲಿನ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ ದಂಡ ವಿಧಿಸಿದೆ. ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ ಸುರೇಶ ಜಾಧವ , ನೀಲಕಂಠ ಮಾಮನಿ ,ಕೃಷ್ಣ ಜಮಾದಾರ, ಸುನೀಲ ಲಾಡಂತಿ, ಅಂಬಿಕಾ ಕೊಡೇಕಲ್ ಮತ್ತು ಅಳಂದ ತಾಲೂಕಿನ ಬಟ್ಟರಗಿಯ ಸಂತೋಷ ತಳವಾರ ಶಿಕ್ಷೆಗೊಳಗಾದವರು. ಶುಕ್ರವಾಡಿ ಗ್ರಾಮದ ದಯಾನಂದ ಲಾಡಂತಿ ಕೊಲೆಯಾದ ವ್ಯಕ್ತಿ. ಕೊಲೆಯಾದ ವ್ಯಕ್ತಿಯ ಕುಟುಂಬದ ಸದಸ್ಯರಿಂದ ಕೊಲೆ ಮಾಡಲು 3 ಲಕ್ಷ ರೂ ಸುಪಾರಿ ಪಡೆದ ಅಂಬಿಕಾ ಕೊಡೇಕಲ್ ವ್ಯವಸ್ಥಿತ ಕೊಲೆಗೆ ಸಂಚು ರೂಪಿಸಿ 2022 ರ ಜೂನ್ 24 ರಂದು ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯ ವಾಜಪೇಯಿ ಬಡಾವಣೆ ಹತ್ತಿರ ಕೊಲೆ ನ