ಚಳ್ಳಕೆರೆ: ಚಳ್ಳಕೆರೆ ನಗರದಲ್ಲಿ ಮನೆಯ ಬೀಗ ಮುರಿದು ಲಕ್ಷಾಂತರ ಹಣ, ಚಿನ್ನಾಭರಣ ದೋಚಿದ ಕಳ್ಳರು
ಮನೆಯ ಬಾಗಿಲು ಮುರಿದು 23 ಲಕ್ಷ ನಗದು ಹಣ ಹಾಗೂ 200 ಗ್ರಾಂ ಚಿನ್ನಾಭರಣವನ್ನ ಕಳ್ಳರು ದೋಚಿದ್ದು,ಬುಧವಾರ ರಾತ್ರಿ 9 ಗಂಟೆಗೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ವಿಠಲ್ ನಗರದಲ್ಲಿ ಘಟನೆ ಜರುಗಿದೆ.ವಿಠಲನಗರ ನಿವಾಸಿ ಮಲ್ಲಿಕಾರ್ಜುನ ಎಂಬುವವರ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ. ವೃತ್ತಿಯಲ್ಲಿ ವ್ಯಾಪರಿಯಾಗಿರುವ ಮಲ್ಲಿಕಾರ್ಜುನ, ಮನೆಯಿಂದ ಹೊರಗೆ ಹೋಗಿದ್ದ ವೇಳೆ ಕಳವು ಮಾಡಲಾಗಿದೆ. ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ 23 ಲಕ್ಷ ಹಣ ಹಾಗೂ 200 ಗ್ರಾಂ ಬಂಗಾರದ ಆಭರಣ ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಠಾಣೆ ಪಿಎಸೈಗಳಾದ ಶಿವರಾಜ್, ಈರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ