ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ದೇವಸ್ಥಾನದಲ್ಲಿ ಕಳ್ಳತನ
ದೀಪೋತ್ಸವ ಮುಗಿದ ರಾತ್ರಿಯೇ ಕಳ್ಳರು ದೇವಾಲಯದಲ್ಲಿ ಕೈಚಳಕ ತೋರಿರುವ ಘಟನೆ ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್ ನಲ್ಲಿರುವ ಶ್ರೀ ಸಿದ್ಧಿಬುದ್ಧಿ ಮಹಾಗಣಪತಿ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಚೌಡೇಶ್ವರಿ ದೇವಸ್ಥಾನದ ಮುಖ್ಯ ಬಾಗಿಲು ಒಡೆದ ಕಳ್ಳರು ಗರ್ಭಗುಡಿಯಲ್ಲಿ ವಿಗ್ರಹದ ಆಭರಣ 400 ಗ್ರಾಂ ತೂಕದ ಒಂದು ಬೆಳ್ಳಿಯ ಮುಖವಾಡ 300 ಗ್ರಾಂ ತೂಕದ ಬೆಳ್ಳಿ ಲೇಪಿತ ಮತ್ತೊಂದು ಮುಖವಾಡ ಕಾಣಿಕೆ ಹುಂಡಿಯಲ್ಲಿದ್ದ 6000 ರೂ. ನಗದು ಹಣವನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.ಈ ಕುರಿತಾಗಿ ದೇವಸ್ಥಾನದ ಆಡಳಿತ ಮಂಡಳಿಯು ತುಂಗಾನಗರ ಠಾಣೆಯಲ್ಲಿ ದೂರು ನೀಡಿದೆ.ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಸೋಮವಾರ ಲಭ್ಯವಾಗಿದೆ.