ಜಮೀನಿನಲ್ಲಿ ಎಮ್ಮೆ ಮೇಯಿಸುತ್ತಿದ್ದ ವೇಳೆ ವಿಕಲಚೇತನ ಯುವಕನ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಅಡಿಕೆ ತೋಟದಲ್ಲಿ ಎಮ್ಮೆ ಮೇಯಿಸುತ್ತಿದ್ದ ವೇಳೆ ಅವಘಡ ಸಂಬವಿಸಿದೆ. ಹೆಜ್ಜೇನು ದಾಳಿಯಿಂದ ಯುವಕ ಅವಿನಾಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವಿನಾಶ್ ರಕ್ಷಣೆಗೆ ಹೋಗಿದ್ದ ಮಹೇಶ್ ಎಂಬಾತನ ಮೇಲೂ ಕೂಡಾ ಜೇನು ನೊಣಗಳು ದಾಳಿ ಮಾಡಿವೆ.ಇಬ್ಬರು ಗಾಯಾಳುಗಳ್ಳನ್ನ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ