ರಾಯಚೂರು: ಜ.6ರಿಂದ ಈಡಿಗ ಸಮಾಜದ ಪಾದಯಾತ್ರೆ : ಪ್ರಣವಾನಂದ ಸ್ವಾಮಿ
ಸಮಾಜದ ಅಭಿವೃದ್ಧಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಂದಿನ ಜನವರಿ 6 ರಿಂದ ಕಲಬುರ್ಗಿ ಜಿಲ್ಲೆ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಶಕ್ತಿಪೀಠದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಬ್ರಹ್ಮ ಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಬುಧವಾರ 11 ಗಂಟೆಗೆ ಹೇಳಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜನವರಿ 6 ರಿಂದ ಈ ಪಾದಯಾತ್ರೆ ಆರಂಭಗೊಳ್ಳಲಿದ್ದು, 41 ದಿನಗಳಲ್ಲಿ 700 ಕಿ.ಮೀ. ಕ್ರಮಿಸಲಿದೆ. ಪ್ರತಿದಿನ 20 ಕಿ.ಮಿ ಪಾದಯಾತ್ರೆ ಮಾಡಲಾಗುವುದು ಎಂದರು.