ರಾಯಚೂರು ತಾಲ್ಲೂಕಿನ ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ, ಮಕ್ಕಳಿಗೆ ಪೌಷ್ಟಿಕ ತೋಟದ ಮಹತ್ವದ ಕುರಿತು ಬೇಸಾಯಿ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಲ್ಲರೆಡ್ಡಿ ಅವರು ತಿಳಿಸಿದರು. ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದುದ್ದು, ಆರೋಗ್ಯ ಇದರ ರಕ್ಷಣೆ ಪೌಷ್ಟಿಕ ಆಹಾರದಿಂದ ಸಾದ್ಯ ಹಾಗಾಗಿ ಪೌಷ್ಟಿಕ ತೋಟ ಬೆಳಸುವುದು ಬಹಳ ಪ್ರಮುಖವಾಗಿದೆ ಎಂಬ ಬಗ್ಗೆ ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ಹೇಮಲತಾ ಅವರು ಮಕ್ಕಳಿಗೆ ತೋಟದ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂದು ಪ್ರಾತ್ಯಕ್ಷೆಯನ್ನು ಮಾಡಿ ಮಾರ್ಗದರ್ಶನ ಮಾಡಿದರು.