ಹೊಳಲ್ಕೆರೆ: ಹೆಲ್ತ್ ಸರ್ಟಿಫಿಕೇಟ್ ಕೊಡೋದಕ್ಕೂ ಹೊಳಲ್ಕೆರೆ ಆಸ್ಪತ್ರೆಯಲ್ಲಿ ಲಂಚ: ವಿಡಿಯೋ ವೈರಲ್
ಶಾಲಾ ಮಕ್ಕಳಿಗೆ ಹೆಲ್ತ್ ಸರ್ಟಿಫಿಕೇಟ್ ಕೊಡೋದಕ್ಕೂ ಆಸ್ಪತ್ರೆ ಸಿಬ್ಬಂದಿಯೊಬ್ಬರು ಲಂಚ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಳಲ್ಕೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಲಂಚಾವತಾರ ನಡೆದಿದ್ದು, ಇದೀಗ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳು ಹೆಲ್ತ್ ಸರ್ಟಿಫಿಕೇಟ್ ಪಡೆಯಲು ಪೋಷಕರ ಜೊತೆ ಆಸ್ಪತ್ರೆಗೆ ಬಂದಿದ್ದ ವೇಳೆ ಹೆಲ್ತ್ ಸರ್ಟಿಫಿಕೇಟ್ ನೀಡಿ, ಲಂಚ ಪಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಸರ್ಟಿಫಿಕೇಟ್ ಪಡೆಯೋದಕ್ಕೂ ಲಂಚ ಕೊಟ್ಟು ಪಡೆಯುವಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ