ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಬ್ಲೂಮೂನ್ ವೈನ್ ಶಾಪ್ ಎದುರು ಫುಟ್ಪಾತ್ ಮೇಲೆ ಸುಸ್ತಾಗಿ ಮಲಗಿದ್ದ ಸುಮಾರು 35 -40 ವರ್ಷದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಡಿ.11 ರಂದು ಮೃತಪಟ್ಟಿರುತ್ತಾನೆ. ಈ ವ್ಯಕ್ತಿಯ ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಎದೆಯ ಮೇಲೆ “ಹುಲುಗಪ್ಪ” ಮತ್ತು ಅಂಜನಪ್ಪ” ಹಾಗೂ ಎಡಗೈನ ಒಳಭಾಗದಲ್ಲಿ “ಈರಮ್ಮ” ಹಾಗೂ ಬಲಗೈನ ಒಳಭಾಗದಲ್ಲಿ ‘ಅಪ್ಪ’ ಮತ್ತು ತ್ರಿಶೂಲದ ಚಿಹ್ನೆಯಿರುವ ಹಚ್ಚೆ ಗುರುತುಗಳು ಇರುತ್ತದೆ.