ಮೊಳಕಾಲ್ಮುರು: ಕರಡಿಹಳ್ಳಿ ಬಳಿ ಕಾಣಿಸಿಕೊಂಡ ಚಿರತೆ ಸೆರೆಗಾಗಿ ಬೊನ್ ಅಳವಡಿಸಿದ ಅರಣ್ಯ ಇಲಾಖೆ
ಮೊಳಕಾಲ್ಮುರು:-ತಾಲೂಕಿನ ಕರಡಿಹಳ್ಳಿ ಗ್ರಾಮದ ಬೆಟ್ಟದ ತುದಿಯಲ್ಲಿ ಹಾಡಹಗಲೇ ಮೂರು ಚಿರತೆಗಳು ಪ್ರತ್ಯಕ್ಷವಾಗಿವೆ. ಕಳೆದ ಹಲವು ದಿನಗಳಿಂದ ನಿರಂತರವಾಗಿ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು ಜನರಿಗೆ ಇನ್ನಿಲ್ಲದ ಭಯ ಹುಟ್ಟಿಸಿದೆ.ತಾಯಿ ಚಿರತೆ ಮರಿಗಳ ಸಮೇತ ಕಾಣಿಸಿಕೊಂಡಿರುವ ಬಗ್ಗೆ ಪಬ್ಲಿಕ್ ಆಪ್ ನಲ್ಲಿ ಸುದ್ದಿ ಕೂಡ ಬಿತ್ತರಿಸಲಾಗಿತ್ತು.ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಸಿಬ್ಬಂದಿಗಳು ಭಾನುವಾರ ಬೆಳಿಗ್ಗೆ 10ಗಂಟೆಗೆ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ, ಚಿರತೆ ಸೆರೆಗಾಗಿ ಬೊನ್ ಅಳವಡಿಸಿದ್ದಾರೆ.