ಕಲಬುರಗಿ : ಬಿಜೆಪಿಯವರು ಬರೀ ಸುಳ್ಳು ಹೇಳ್ತಾರೆ.. ಗ್ಯಾರಂಟಿ ಸ್ಕೀಮ್‌ಗಳ ಮಧ್ಯೆ ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡ್ತಿದ್ದರು ಸಹ ಅಪಪ್ರಚಾರ ಮಾಡ್ತಿದಾರೆಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.. ಜನವರಿ 12 ರಂದು ಮಧ್ಯಾನ 3 ಗಂಟೆಗೆ ಯಡ್ರಾಮಿಯಲ್ಲಿ ಮಾತನಾಡಿದ ಅವರು, ಕೋಮುವಾದ, ಹಿಂದೂತ್ವ ಮಾಡಿಕೊಂಡಿರೋ ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲವೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು