ದೊಡ್ಡಬಳ್ಳಾಪುರ: ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ನಗರದಲ್ಲಿ ಕರವೇ ಹಾಗೂ ಮುಸ್ಲಿಂ ಯೂತ್ ಅಸೋಸಿಯೇಷನ್‌ನಿಂದ ಶ್ರದ್ಧಾಂಜಲಿ ಸಭೆ
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಹಾಗೂ ಮುಸ್ಲಿಂ ಯೂತ್ ಅಸೋಸಿಯೇಷನ್ ದೊಡ್ಡಬಳ್ಳಾಪುರ ವತಿಯಿಂದ ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ದೊಡ್ಡಬಳ್ಳಾಪುರದ ಸಿದ್ಲಿಂಗಯ್ಯ ವೃತ್ತದಿಂದ ಮೊಂಬತ್ತಿ ಬೆಳಗುವ ಮುಖಾಂತರ ಗಾಂಧಿ ಚೌಕಕ್ಕೆ ಬಂದು ಸಂತಾಪ ಸಭೆಯನ್ನು ಮಾಡಲಾಯಿತು ಮಹೇಶ್ ಹಮಾಮ್ ವೆಂಕಟೇಶ್ ಜೋಗಳ್ಳಿ ಅಮ್ಮು ಬಶೀರ್ ರವಿ ಮಂಜುನಾಥ್ ಮುನಿಕೃಷ್ಣಪ್ಪ ಅಬ್ದುಲ್ ರೌಫ ಆಜಾಮ್ ಹಿನಾಯ್ತ್ ಶಿರಾಜ್ ಇರ್ಫಾನ್ ಇಮ್ರಾನ್ ವಾಸಿಂ ಶಕೂರ್ ಭಾಗವಹಿಸಿದ್ದರು.