ಗುಂಡ್ಲುಪೇಟೆ ಪಟ್ಟಣದಲ್ಲಿ ಶಾಸಕ ಗಣೇಶ್ ಪ್ರಸಾದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆಯುವ ಚರ್ಚೆ ಸತ್ಯಕ್ಕೆ ದೂರವಾಗಿದೆ. ಹೈಕಮಾಂಡ್ ಹೇಳಿದಂತೆ ಸಿಎಂ, ಡಿಸಿಎಂ ನಡೆದುಕೊಳ್ತೇವೆ ಅಂತಾ ತಿಳಿಸಿದ್ದಾರೆ. ಸಚಿವರು ಸಚಿವಾರಾಗಿ ಮುಂದುವರೆಯಲು ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗ್ತಿದ್ದಾರೆ. ನಾನು ಯಾರ ಬಣದಲ್ಲಿಯೂ ಗುರುತಿಸಿಕೊಂಡಿಲ್ಲ ಹೈಕಮಾಂಡ್, ಪಾರ್ಟಿ ಏನ್ ಹೇಳುತ್ತೆ ಅದನ್ನು ಕೇಳುತ್ತೇನೆ. ನಾನು ದೆಹಲಿಗೆ ಹೋಗಿರುವ ಯಾರ ಜೊತೆಯೂ ಕೂಡ ಸಂಪರ್ಕದಲ್ಲಿ ಇಲ್ಲ ಎಂದರು