ಕುಮಟಾ : ಗೋಕರ್ಣ ಮುಖ್ಯ ಕಡಲ ತೀರದಲ್ಲಿ ಸಮುದ್ರ ಪಾಲಾಗುತ್ತಿದ್ದ ಎಂಟು ಜನ ಪ್ರವಾಸಿಗರನ್ನು ಸ್ಥಳೀಯ ಜೀವ ರಕ್ಷಕ ಸಿಬ್ಬಂದಿಗಳು, ಪ್ರವಾಸಿ ಮಿತ್ರ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಶನಿವಾರ ಮಧ್ಯಾಹ್ನ 3:30 ಗಂಟೆ ಸುಮಾರಿಗೆ ನಡೆದಿದೆ. ಕೊಪ್ಪಳ ಮೂಲದವರಾದ 12 ಜನ ಪ್ರವಾಸಕ್ಕೆ ಬಂದಿದ್ದು, ಅವರಲ್ಲಿ ಅಭಿಷೇಕ್ ಹನುಮಂತ ವಳಗೇರಿ, ಹುಸೇನ್ ಸಾಬ್, ಶಿವರಾಜ್ ಮರಿಯಪ್ಪ ಯಾಟಿ, ಮತ್ತು ಮುತ್ತುರಾಜ್ ಮೈಲಾರಪ್ಪ ಕೊಡಲಗಿ ಹಾಗೂ ಚಿತ್ರದುರ್ಗದಿಂದ ಬಂದಿದ್ದ 17 ಜನ ಪ್ರವಾಸಿಗರ ಪೈಕಿ ನೀರಿನಲ್ಲಿ ಈಜಾಡುತ್ತಿದ್ದಾಗ ಸಮುದ್ರದಲ್ಲಿ ಮುಳುಗುತ್ತಿದ್ದ ಅವಿನಾಶ್ ತಿಪ್ಪೇಸ್ವಾಮಿ, ರಘು ತಿಪ್ಪೇಸ್ವಾಮಿ ಚಳ್ಳಕೆರೆ, ಅಜಯ್ ಗಂಗಪ್ಪ ಚಳ್ಳಕೆರೆ, ಅಶ್ವತ್ ಇವರನ್ನು ತಕ್ಷಣವೆ ರಕ್ಷಣೆ ಮಾಡಲಾಗಿದ