ಶಿವಮೊಗ್ಗ: ಚನ್ನಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆ ದಾಳಿ: ಅಪಾರ ಪ್ರಮಾಣದ ಬೆಳೆ ಹಾನಿ
ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಚನ್ನಳ್ಳಿ, ಮಲೆ ಶಂಕರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನಿಗಳ ಉಪಟಳ ಹೆಚ್ಚಾಗಿದೆ ರಾತ್ರಿ ಹೊತ್ತು ಅಲ್ಲದೆ ಹಗಲಿನ ಹೊತ್ತಲ್ಲೂ ತೋಟ, ಗದ್ದೆ, ಹೊಲಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡುತ್ತಿವೆ ರೈತರು ಕಷ್ಟಪಟ್ಟು ಬೆಳೆದಂತಹ ಭತ್ತ,ಅಡಿಕೆ, ಬಾಳೆ, ತೆಂಗಿನ ಬೆಳೆಯನ್ನ ನಾಶ ಮಾಡಿದ್ದು, ಕೂಡಲೇ ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಆನೆಗಳನ್ನ ಸೆರೆ ಹಿಡಿಯುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತಾದ ಮಾಹಿತಿ ಶುಕ್ರವಾರ ಲಭ್ಯವಾಗಿದೆ.