ಬೆಳಗಾವಿ ಜಿಲ್ಲಾ ವಿಭಜನೆ ವಿಚಾರ ನಗರದಲ್ಲಿ ಸಿಎಂ ಭೇಟಿ ಮಾಡಿದ ಸ್ವಾಮೀಜಿಗಳು. ಬೆಳಗಾವಿ ಜಿಲ್ಲಾ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಮಾಡುವಂತೆ ಗೋಕಾಕ ಜಿಲ್ಲಾ ವಿಭಜನೆ ನಿಯೋಗ ಇಂದು ಸೋಮವಾರ 8 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಿಎಂ ಭೇಟಿ ಮಾಡಿದ ನಿಯೋಗ ಹಲವು ಶ್ರೀಗಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದು ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ,ಗೋಕಾಕ ಶೂನ್ಯ ಸಂಪಾದನ ಮಠದ ಮುರಗ ರಾಜೇಂದ್ರ ಸ್ವಾಮೀಜಿ ಸೇರಿ ಹಲವು ಮಠಾಧೀಶರು ಸೇರಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೂಡಾ ಭೇಟಿ ಮಾಡಿ ಮನವಿ ಮಾಡಿದರು.