ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಜುಂಜಪ್ಪ ಸ್ವಾಮಿ ಮತ್ತು ತಿಮ್ಮಪ್ಪ ಸ್ವಾಮಿಯ ಕಾರ್ತಿಕ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಕೆರೆಯಾಗಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಾಡು ಗೊಲ್ಲರ ಆರಾಧ್ಯ ದೈವ ಮತ್ತು ಕಾಡುಗೊಲ್ಲರ ದೊರೆ ಜುಂಜಪ್ಪ ಸ್ವಾಮಿ ಮತ್ತು ತಿಮ್ಮಪ್ಪ ಸ್ವಾಮಿಯ ಕಾರ್ತಿಕ ಮಹೋತ್ಸವ ನೆರವೇರಿತು. ಈ ಕಾರ್ತಿಕ ಮಹೋತ್ಸವದಲ್ಲಿ ಜುಂಜಪ್ಪ ಸ್ವಾಮಿ ಮತ್ತು ತಿಮ್ಮಪ್ಪ ಸ್ವಾಮಿಯನ್ನು ಹಳ್ಳದ ಪೂಜೆಗೆ ತೆಗೆದುಕೊಂಡು ಹೋಗಿ ಅಲ್ಲಿ ಅಭಿಷೇಕದ ಪೂಜೆಯನ್ನು ಮಾಡಿ ಅಲ್ಲಿಂದ ಕೆರೆಯಾಗಲಹಳ್ಳಿ ಗ್ರಾಮಕ್ಕೆ ವಡ್ಡು ಓಲಗದ ಮೂಲಕ ಮತ್ತು ಕಾಡುಗೊಲ್ಲರ ಸಂಪ್ರದಾಯದ ಪ್ರಕಾರ ದೇವರನ್ನ ಕತೆ ತರಲಾಯಿತು.