ಸಿರಗುಪ್ಪ: ತೆಕ್ಕಲಕೋಟೆಯಲ್ಲಿ ಉಚಿತ ಕಾಯಿಲೆಗಳ ತಪಾಸಣಾ ಶಿಬಿರ, ಮಾಜಿ ಸಚಿವ ಬಿ.ಶ್ರೀರಾಮುಲು ಭಾಗಿ
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ದಿ.ಎಂ.ಸಿದ್ದಪ್ಪ ತೆಕ್ಕಲಕೋಟೆ ಇವರ ಸ್ಮರಣಾರ್ಥ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಮಾಜಿ ಶಾಸಕ ಸೋಮಲಿಂಗಪ್ಪ ಅವರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉಚಿತ ಹೃದಯರೋಗ, ನರಯೋಗ, ಮೂತ್ರಪಿಂಡ ಕಲ್ಲು ಇತರ ಕಾಯಿಲೆಗಳ ತಪಾಸಣಾ ಶಿಬಿರವನ್ನು ನ.17,ಸೋಮವಾರ ಮಧ್ಯಾಹ್ನ 12ಗಂಟೆಗೆ ಉದ್ಘಾಟಿಸಲಾಯಿತು. ಆರೋಗ್ಯವೇ ಭಾಗ್ಯ ಎಂಬಂತೆ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಉತ್ತಮ ಆರೋಗ್ಯಕ್ಕಾಗಿ ಇಂತಹ ಶಿಬಿರಗಳನ್ನು ಪ್ರತಿಯೊಬ್ಬ ಜನಪ್ರತಿನಿಧಿಗಳು ಎಲ್ಲಾ ಕಡೆ ಹೆಚ್ಚಿನ ಪ್ರಮಾಣದಲ್ಲಿ ಆಯೋಜನೆ ಮಾಡಬೇಕಾದ ಅಗತ್ಯವಿದೆ ಎ