ನಿರ್ಮಾಣ ಹಂತದಲ್ಲಿರುವ ಮನೆಗೆ ಮೇಲ್ಚಾವಣಿ ಹಾಕಲು ತಂದಿದ್ದ ಸೆಂಟ್ರಿಂಗ್ ಸಾಮಾನು ವಾಹನದಿಂದ ಇಳಿಸುವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ದುರ್ಮರಣ ಹೊಂದಿರುವ ಘಟನೆ ಚಿಂಚೋಳಿ ತಾಲೂಕಿನ ಕೊಟಗಾ ಗ್ರಾಮದಲ್ಲಿ ನಡೆದಿದೆ. ರಟಕಲ್ ಗ್ರಾಮದ 38 ವರ್ಷ ವಯಸ್ಸಿನ ಸಂಗಮೇಶ್ ಬಿರಾದಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಮೇಲ್ಚಾವಣಿ ಹಾಕಲು ರಟಕಲ್ ಗ್ರಾಮದಿಂದ ಸೆಂಟ್ರಿಂಗ್ ಸಾಮಾನುಗಳನ್ನು ತಂದಿದ್ದ ವ್ಯಕ್ತಿ ಅವುಗಳನ್ನು ಇಳಿಸುವಾಗ ಮನೆ ಮೇಲೆ ಹಾಯ್ದು ಹೋದ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ ಎಂದು ಗುರುವಾರ 5 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...