ಕಾರಟಗಿ: ಕನಕಗಿರಿ ಮತ್ತು ಕಾರಟಗಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಪಟ್ಟಣದಲ್ಲಿ ಯಶಸ್ವಿ
ಕನಕಗಿರಿ ಮತ್ತು ಕಾರಟಗಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಇಂದು ನಡೆಯಿತು. ಸೆಪ್ಟೆಂಬರ್ 25 ರಂದು ಮಧ್ಯಾಹ್ನ 2-30 ಗಂಟೆಗೆ ಕಾರಟಗಿ ಪಟ್ಟಣದಲ್ಲಿ ನಡೆದ ಸಭೆಯ ನೇತೃತ್ವವನ್ನು ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿಶ್ರೀನಿವಾಸ ವಹಿಸಿದ್ದರು. ಈ ಸಭೆಯಲ್ಲಿ ಕನಕಗಿರಿ ತಾಲ್ಲೂಕಿನ ಅಧ್ಯಕ್ಷರು ಹಜರತ್ ಹುಸೇನ್ ಮತ್ತು ಕಾರಟಗಿ ತಾಲೂಕು ಅಧ್ಯಕ್ಷರಾದ ದೇವಪ್ಪ ಭಾವಿಕಟ್ಟಿ, ಎರಡು ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಮತ್ತು ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.