ಹಿರಿಯೂರು ನಗರದ ನಗರಸಭೆ ಸಭಾಂಗಣದಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಸಭೆ ಹಮ್ಮಿಕೊಳ್ಳಲಾಗಿತ್ತು. ಗುರುವಾರ ಮಧ್ಯಾಹ್ನ 12 ಗಂಟೆಗೆ ಸಭೆ ಹಮ್ಮಿಕೊಂಡಿದ್ದು ನಗರಸಭೆ ಆಯುಕ್ತರಾದ ವಾಸಿಮ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರದಲ್ಲಿರುವ ಎಲ್ಲಾ ಚಿಕನ್ ಮಟನ್ ಅಂಗಡಿಯವರನ್ನು ಈ ಸಭೆಗೆ ಕರೆದು ಅವರಲ್ಲಿ ಮನವಿ ಮಾಡಿ ಕೊಂಡ ವಾಸಿಂ ಅವರು ನಗರವನ್ನು ಶುದ್ಧವಾಗಿ ಇಡುವ ಸಲುವಾಗಿ ಅಂಗಡಿಯ ವೇಸ್ಟ್ ಪೀಸ್ ಗಳನ್ನು ಹೊರಗೆ ರಸ್ತೆಗೆ ಎಸೆಯುವ ಕೆಲಸ ಮಾಡುವವರಿಗೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಮ್ಮ ಮೇಲೆ ದಂಡ ಹಾಕುವುದಾಗಿ ತಿಳಿಸಿದ್ದಾರೆ