ಸಿರಗುಪ್ಪ: ನಗರದ ಮುಖ್ಯ ರಸ್ತೆಯ ಮಧ್ಯೆ ಭತ್ತದ ಮೂಟೆಗಳು ಕೆಳಗೆ ಬಿದ್ದ ಘಟನೆ
ಸಿರುಗುಪ್ಪ ಪಟ್ಟಣದ ಮುಖ್ಯರಸ್ತೆಯಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ನಲ್ಲಿ ಅಕಸ್ಮಾತ್ ತೂಕ ಸಮತೋಲನ ತಪ್ಪಿದ ಪರಿಣಾಮ, ಹಲವು ಭತ್ತದ ಮೂಟೆಗಳು ರಸ್ತೆ ಮೇಲಕ್ಕೆ ಉರುಳಿ ಬಿದ್ದ ಘಟನೆ ನ.17,ಸೋಮವಾರ ಸಂಜೆ 4ಕ್ಕೆ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ರೈತರು ಸ್ಥಳಕ್ಕೆ ಧಾವಿಸಿ, ರಸ್ತೆ ಮಧ್ಯೆ ಬಿದ್ದಿದ್ದ ಭತ್ತದ ಮೂಟೆಗಳನ್ನು ಸಂಗ್ರಹಿಸಿ, ಬೇರೆ ವಾಹನಕ್ಕೆ ಸ್ಥಳಾಂತರಿಸಿ ಕೊಂಡೊಯ್ದಿದ್ದಾರೆ. ಈ ನಡುವೆ ಕೆಲ ಹೊತ್ತು ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು.