ಕೊಳ್ಳೇಗಾಲ: ಹೊಸ ಹಂಪಾಪುರದಲ್ಲಿ ಯುವತಿ ಆತ್ಮಹತ್ಯೆ- ಹೊಟ್ಟೆನೋವು ತಾಳಲಾರದ ನೇಣಿಗೆ ಶರಣು
ಕೊಳ್ಳೇಗಾಲ ತಾಲೂಕಿನ ಹೊಸಹಂಪಾಪುರ ಗ್ರಾಮದ ನರ್ಸಿಂಗ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಹೊಸ ಹಂಪಾಪುರ ಗ್ರಾಮದ ದಿ.ಮಹದೇವ ನಾಯಕ ಎಂಬವರ ಮಗಳು ಪ್ರಿಯಾಂಕಾ ಮೃತ ದುರ್ದೈವಿ. ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಈಕೆ ಇನ್ನೆರಡು ತಿಂಗಳಲ್ಲಿ ನರ್ಸಿಂಗ್ ತರಬೇತಿಯು ಪೂರ್ಣಗೊಳ್ಳಲ್ಲಿತ್ತು. ಹೊಟ್ಟೆನೋವು ತಾಳಲಾರದೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತಳ ತಾಯಿ ದೂರು ಕೊಟ್ಟಿದ್ದು ಪಟ್ಟಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.