ಹನೂರು ಪಟ್ಟಣದ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಸುತ್ತೂರು ಶ್ರೀ ರಾಜೇಂದ್ರ ಶ್ರೀಗಳ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕರಾದ ಆರ್ ನರೇಂದ್ರ ಮತ್ತು ಹಾಲಿ ಶಾಸಕ ಮಂಜುನಾಥ್ ಇಬ್ಬರು ಮಾತನಾಡುವಾಗ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳು ಮತ್ತು ತಾಲೂಕಿನ ಅಭಿವೃದ್ಧಿಗೆ ಹಲವು ಸೌಕರ್ಯಗಳಿಗೆ ನೀಡಲು ಸಿಎಂ ಬಳಿಖುದ್ದು ತಿಳಿಸಿ ವಿಶೇಷ ಬೆಂಬಲ ನೀಡುವಂತೆ ಎ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಮುಂದೆ ಮನವಿ ಸಲ್ಲಿಸಿದರು. ಇದ್ದಕ್ಕೆ ಸುತ್ತೂರು ಶ್ರೀಗಳು ಪ್ರತಿಕ್ರಯಿಸಿ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದರು