ಕಲಬುರಗಿ : ಸೋಮನಾಥ ದೇಗುಲಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡುವುದರ ಜೊತೆಗೆ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ... ಜನವರಿ 12 ರಂದು ಮಧ್ಯಾನ 3.30 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಮೋದಿ ಬರಿ ಹಳೆ ಗುಂಡಿ ಗುಂಡಾರಗಳನ್ನ ಅಡ್ಡಾಡ್ತಿದಾನೆ. ದೇವರು ನಿಮ್ಮ ಕೆಲಸಗಳಿಂದ ಪ್ರಸನ್ನವಾಗುತ್ತಾನೆ ಹೊರೆತು ಗುಡಿಗೆ ಹೋಗಿ ಗಂಟೆ ಬಾರಿಸಿದ್ರೆ ಪ್ರಸನ್ನ ಆಗ್ತಾನಾ ಅಂತಾ ಮೋದಿ ವಿರುದ್ಧ ಖರ್ಗೆ ಕಿಡಿಕಾರಿದ್ದಾರೆ.. ಇಂತಹ ನಾಟಕವಾಡೋ ಜನರಿಗೆ ಬುದ್ದಿ ಕಲಿಸೋ ಕೆಲಸ ಜನ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.